Sunday, March 6, 2011

ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆಯೇ ಅಸಹ್ಯ

....ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಕೀಪರ್‌ಗೆ ಮೊದಲು ಕಾಣುವುದು ಎದುರಿಗಿರುವ ಸ್ಟಂಪ್, ನಂತರ ಕಾಣುವುದು ಆಟಗಾರರ ಪೃಷ್ಠ. ಹೀಗೆ ಆಟಗಾರರ ಹಿಂಭಾಗವನ್ನು ನೋಡುತ್ತ ನೋಡುತ್ತ ತನ್ನ ಮನಸ್ಸನ್ನೇ ಬದಲಾಯಿಸಿಕೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸ್ಟೀವನ್ ಡೇವಿಸ್ ತಾನು ಸಲಿಂಗಕಾಮಿ ಎಂದು ಸ್ಪಷ್ಟಪಡಿಸಿದ್ದಾರೆ.....




ಇಂತ ಪ್ರಶ್ನೆಯನ್ನು ಓದುಗರ ಮುಂದಿಟ್ಟು, ಮತ್ತೆ ಬರೆಯುತ್ತಾ ಈ ರೀತಿಯೂ ಹೇಳಿದ್ದಾರೆ


...ಸಲಿಂಗ ಕಾಮವನ್ನು ಅಪರಾಧವಲ್ಲ ಎಂದು ನಮ್ಮ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ.....................................................
ಸಾಂಪ್ರದಾಯಿಕ ಸಂಪಾದಕೀಯದವರಿಗೆ ನಾವು ಮುಂದಿಡುತ್ತಿರುವ ಪ್ರಶ್ನೆ.


ಸುಪ್ರೀಂ ಕೋರ್ಟ್ ತೀರ್ಪುನ್ನು ನೀವೂ ಸಹ ಒಪ್ಪಿಕೊಳ್ಳುತ್ತೀದ್ದೀರ ಅಂತಾಯ್ತು. ಮತ್ಯಾಕೆ ಅಸಹ್ಯ? 

ಕೊ.ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಗೌರವ ಬೆಳೆಸಿಕೊಳ್ಳಿ.

Friday, March 4, 2011

ಪರಿಚಯ

ನಮಸ್ಕಾರ

ನಮ್ಮ ಬಗ್ಗೆ ಹೇಳಿಕೊಳ್ಳಲು ಹೊಸದೇನೂ ಇಲ್ಲ. ನಾವು ಈಗಾಗಲೇ ಕನ್ನಡ ಬ್ಲಾಗ್ ಲೋಕದ ಪ್ರಶ್ನಾತೀತ ಪ್ರಭುಗಳೆಂದು ಜಗತ್ ಪ್ರಸಿದ್ದಿಯಾಗಿದ್ದೇವೆ. ಪದೇ ಪದೇ ನಮ್ಮನ್ನು ನಾವೇ ಹೊಗಳಿ ಕೊಳ್ಳುವುದನ್ನು ನೀವೂ ಸಹಿಸುವುದಿಲ್ಲವಾದ್ದರಿಂದ ನಮ್ಮ ಪರಿಚಯವನ್ನು ಇಲ್ಲಿಗೇ ಮುಗಿಸುತ್ತಿದ್ದೇವೆ.

ನಿಮಗೇನಾದರೂ ಹೇಳಬೇಕಿಸಿದರೆ ನೀವೂ ಸಹ ಹೇಳಿಯೇ ಹೇಳುತ್ತೀರಿ ಎಂದು ನಾವು ಪ್ರಬಲವಾಗಿ ನಂಬಿಕೊಂಡಿದ್ದೇವೆ. ಏಕೆಂದರೆ ನಮ್ಮ ಓದುಗರು 
ಅಷ್ಟು ತಿಳಿವಳಿಕೆಯುಳ್ಳವರು ಎಂದು ನಾವೂ ಎಣಿಸಿದ್ದೇವೆ.  ಮಿಂಚೆ, ಬ್ಗಾಗು, ಕಾಮೆಂಟು, ಪೇಸ್‌ ಬುಕ್ಕು, ಟ್ವಿಟ್ಟರ್ ಎಲ್ಲವನ್ನೂ ನಮ್ಮ ಓದುಗರೂ ಬಲ್ಲವರಾದ್ದರಿಂದ , ವಿಶೇಷವಾಗಿ ಹೆಚ್ಚೇನೂ ವಿವರಿಸುವುದಿಲ್ಲ.

ಅಂದ ಹಾಗೆ ಚರ್ಚೆ ಆರೋಗ್ಯಕರವಾಗಿರಲಿ.
-
ಸಂಪಾದಕೀಯ